Thursday, April 22, 2010
ನಡೆದಾಡುವ ನಕ್ಷತ್ರಗಳು
ಮೊದಲಿಗೆ ನನ್ನ ಈ ಪುಟ್ಟ ಬ್ಲಾಗಿನಲ್ಲಿ ನಡೆದಾಡಿ ಹೋಗುವ ಎಲ್ಲ ನಕ್ಷತ್ರಗಳಿಗೂ, ಹೃತ್ಪೂರ್ವಕವಾದ ಸ್ವಾಗತವನ್ನು ಕೋರಿ, ವಂದನೆಗಳನ್ನು ತಿಳಿಸುತ್ತೇನೆ.
ಚಿತ್ರದುರ್ಗದ ಏಕಲವ್ಯ ಸಂಸ್ಥೆಯಿಂದ ಸಂಯೋಜಿಸಲಾದ ಈ ಒಂದು ಹೋರಾಟ/ಚಳುವಳಿ ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯಾಯಿತು. ಸಂಘಟನೆಯ ನಿಮ್ಮೆಲ್ಲರೊಂದಿಗೆ ಕಳೆದ ಆ ಒಂದು ತಿಂಗಳು,....... ಆ ಹಾ ಎಂತಹ ಸಂತೋಷವನ್ನುಂಟು ಮಾಡಿತ್ತು. ಚಂದ್ರು, ರಮಿಜಾ ಎಂಬ ಆ ಇಬ್ಬರು ಮಕ್ಕಳು ನನ್ನ ಅಕ್ಷಿಯ ಅಂಚಿನಿಂದ ದೂರವಾಗದೆ ಹಾಗೆ ಉಳಿದಿದ್ದಾರೆ. ಕೆ.ಪಿ.ಎಂ ಗಣೇಶಯ್ಯ S/o. ಸಧ್ಯೋಜಾತಯ್ಯ ದಾವಣಗೆರೆ, ಡಿಂಗ್ರಿ ನರಸಪ್ಪ ರಾಯಚೂರು, ರಾಮು, ಲತಾ ಭಾರತಿ, ಜ್ಯೋ.......... ಜ್ಯೋತಿ......... ಹಾಂ..... ಜ್ಯೋತಿ ನನ್ ಜ್ಯೋತಿ ಬೀದರ್ ನೋಳು, ಅವಳೇ........... ಅವಳೇ........ ಚೆನ್ನಾಗಿ ಜ್ಞಾಪಕ ಬಂತು ಅವಳೇ........ ಅವಳೇ ನನ್ ಜ್ಯೋತಿ ........ ಎಲ್ಲೀದ್ದೀಯಾ ಜ್ಯೋತಿ? ನನ್ ನೆನಪು ನಿನಗೆ ಬರ್ತಾ ಇಲ್ವೆ? ಹಯ್ಯೋ ನಾನೆಂಥ ತಪ್ಪ ಮಾಡಿ ಬಿಟ್ಟೆ ನಿನ್ನ ಮರ್ತೇ ಬಿಟ್ಟಿದಿನಲ್ಲ. ಇಲ್ಲ ಜ್ಯೋತಿ ಇಲ್ಲ, ನಾನ್ ನಿನ್ ಮರ್ತಿಲ್ಲ, ನಾನ್ ನಿನ್ ಮರಿಯಲ್ಲ......... ಅಂ...... ಆ...... ಅ.... ನಾನ್ ನಿನ್ನ ಮರಿಯೋದಕ್ಕ್ ಸಾಧ್ಯನೇ ಇಲ್ಲ ಜ್ಯೋತಿ. ಎಲ್ಲಿದಿಯಾ ಜ್ಯೋತಿ? ನಾನ್ ನಿನ್ನ ತುಂಬಾ ಸತಾಯಿಸ್ತಾ ಇದ್ನಲ್ಲ ಆವಾಗ, ನೀನ್ ತುಂಬಾ ನಾಚ್ಕೊಂತಾ ಇದ್ದೆ. ಈಗ ಎಲ್ಲಿದ್ದಿಯಾ? ಜ್ಯೋತಿ ಹ್ಯಾಗಿದ್ದಿಯಾ? ನಾನ್ ನಿನ್ನ ನೋಡಬೇಕಲ್ಲ ಜ್ಯೋತಿ ?
Subscribe to:
Post Comments (Atom)
No comments:
Post a Comment